"ಮಹಾಬಲಕವಿ":~
1254, ನೇಮಿನಾಥ ಪುರಾಣದ ಕರ್ತೃ, ತಂದೆ ರಾಯಿದೇವ, ತಾಯಿ ರಾಜಿಯಕ್ಕ. ಗುರು ಮೇಘಚಂದ್ರನೆಂದೂ ಸಕಲ ಕಲಾಕಲಾಪ ತ್ರೈವಿದ್ಯ ಚಕ್ರವರ್ತಿಯಾದ ಮಾಧವಚಂದ್ರ ಈತನ ವಿದ್ಯಾಗುರುವೆಂದೂ ಕಂಡುಬರುತ್ತದೆ. ಸ್ವತಃ ಕವಿಯೂ ಕಲಿಯೂ ಆದ ಕೇತಯನಾಯಕ ಅಥವಾ ಕ್ಪೀಮಂತರ ಮಹಾ ಬಲಕವಿಯಿಂದ ಈ ನೇಮಿತಾಥ ಪುರಾಣವನ್ನು ರಚನೆಮಾಡಿಸಿದನೆಂದು ತಿಳಿದು ಬರುತ್ತದೆ. ಮಹಾಬಲಕವಿ ಕೇತಯನಾಯಕನ ಸಚಿವನಾಗಿದ್ದನೆಂದೂ ಶ್ರುತಾಚಾರ್ಯರೇ ಮೊದಲಾದ ವಿದ್ವಜ್ಜನರ ಸಭೆಯಲ್ಲಿ ಕಾವ್ಯ ಹೇಳಿ ಶಿಷ್ಯನಾದ ಲಕ್ಪ್ಮನಿಂದ ಬರೆಸಿದನೆಂದೂ ಹೇಳಿಕೊಂಡಿದ್ದಾನೆ. ಸಹಜ ಕವಿ ಮನೋಗೇಹ ಮಾಣಿಕ್ಯ ದೀಪನೆಂದೂ ವಿಶ್ವವಿದ್ಯಾವಿರಿಂಚನೆಂದು ತನ್ನನ್ನು ಪ್ರಶಂಸೆ ಮಾಡಿಕೊಂಡಿದ್ದಾನೆ. 

	ನೇಮಿನಾಥ ಪುರಾಣ 22ನೆಯ ತೀರ್ಥಂಕರ ನೇಮಿನಾಥನ ಚರಿತ್ರೆ. ಹದಿನಾರು ಆಶ್ವಾಸ, ಚಂಪೂಗ್ರಂಥ, ನೇಮಿನಾಥನ ಚರಿತ್ರೆಯೊಡನೆ ಹರಿವಂಶ ಕರುವಂಶಗಳ ಕಥೆಯನ್ನೂ ಕವಿ ಸವಿವರವಾಗಿ ಚಿತ್ರಿಸಿದ್ದಾನೆ. ರಚನೆ ರೀತಿ ಕಥಾಸಾಮಗ್ರಿಗಳು ಸಾಂಪ್ರದಾಯಿಕವಾಗಿವೆ. ಕಥಾಸನ್ನಿವೇಶ, ಪಾತ್ರರಚನೆಗಳಲ್ಲಿ ಕವಿ ಜಿನಸಮಯ ಸಂಪ್ರದಾಯಗಳಿಗೆ ಬದ್ಧನಾಗಿದ್ದಾನೆ. ಅದರೆ ಕಾವ್ಯ ಪ್ರೌಢಬಂಧದಿಂದ ಮನೋಜ್ಞವರ್ಣನೆಗಳಿಂದ ಗ್ರಾಹ್ಯವಾಗಿದ್ದ.				
(ಬಿ.ಎಸ್.ಆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ